ಗಣೇಶೋತ್ಸವ ಧರ್ಮ, ಸಂಸ್ಕೃತಿ, ಸಂಘಟನೆ, ರಾಷ್ಟç ಚೇತನಕ್ಕಾಗಿ ಮಾಡುವಂತಹ ಮಹೋತ್ಸವ
ಸಾರ್ವಜನಿಕ ಹಿಂದೂ ಮಾಹಾಗಣಪತಿ ಸೇವಾ ಸಮಿತಿ ಪೂರ್ವಭಾವಿ ಸಭೆಯಲ್ಲಿ ರಮಾನಂದಗೌಡ
ಗಣೇಶೋತ್ಸವ ಕೇವಲ ಹಬ್ಬವಲ್ಲ. ಧರ್ಮ, ಸಂಸ್ಕೃತಿ, ಸಾಧನೆ, ಸಮಾಜ ಸಂಘಟನೆ, ರಾಷ್ಟç ಚೇತನಕ್ಕಾಗಿ ಮಾಡುವಂತಹ ಮಹೋತ್ಸವ ಎಂದು ಸನಾತನ ಧರ್ಮ ಪ್ರಚಾರಕ ಮಂಗಳೂರಿನ ರಮಾನಂದಗೌಡ ಹೇಳಿದರು.

ಅವರು ಭಾನುವಾರ ಸಂಜೆ ಪಟ್ಟಣದ ಅಡ್ಯಂತಾಯ ರಂಗಮAದಿರದಲ್ಲಿ ಸಾರ್ವಜನಿಕ ಹಿಂದೂ ಮಹಾ ಗಣಪತಿ ಸೇವಾ ಸಮಿತಿ ವತಿಯಿಂದ ಗಣೇಶೋತ್ಸವ ಆಚರಿಸುವ ಬಗ್ಗೆ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಪ್ರವಚನ ನೀಡಿ ಮಾತನಾಡಿದರು. ಇಂದು ದೇವರಲ್ಲಿರುವ ಭಕ್ತಿ ವಿಕೃತಿಯಾಗುತ್ತಿದೆ. ಅದು ನಡೆಯದಂತೆ ಸತ್ವಗುಣ ಅಧಿಕವಾಗಬೇಕು. ಅದಕ್ಕಾಗಿ ಗಣೇಶ ಉತ್ಸವದಲ್ಲಿ ಪೂಜೇ ಶಾಸ್ತೊçÃಸ್ತವಾಗಿ ನಡೆಯಬೇಕು. ಸಾಮೂಹಿಕ ಆರಾಧ್ಯವಾಗಬೇಕು. ಭಗವಂತನ ಭಜನೆ ನಡೆಯಬೇಕು. ಧರ್ಮ ಜಾಗೃತಿ ಪ್ರವಚನ ಆಗಬೇಕು. ಇದರಿಂದ ಆಗಮಿಸುವ ಭಕ್ತರದಲ್ಲಿ ಧರ್ಮಾಚರಣೆ ಹುಟ್ಟುವ ಮೂಲಕ ಜೀವನದಲ್ಲಿ ಬದಲಾವಣೆ ಮೂಡುತ್ತದೆ ಎಂದು ಹೇಳಿದರು.
ಸಮಿತಿಯ ಗೌರವಾಧ್ಯಕ್ಷ ಎಂ.ಕೆ.ಪ್ರಾಣೇಶ್ ಮಾತನಾಡಿ, ವ್ಯವಸ್ಥಿತವಾಗಿ ರೂಪುಗೊಂಡಿರುವ ಸಾರ್ವಜನಿಕ ಹಿಂದೂ ಮಹಾಸಭಾ ಗಣಪತಿ ಉತ್ಸವವನ್ನು ಈ ಬಾರಿ ಇನ್ನಷ್ಟು ವಿಜ್ರಂಭಣೆಯಿAದ ಆಚರಿಸಲು ಎಲ್ಲರೂ ಕೈಜೋಡಿಸಬೇಕು. ಇದರಿಂದ ಹಿಂದೂ ಭಾವನೆಯಲ್ಲಿ ಇದೊಂದು ಆಡಂಬರಣಕ್ಕಲ್ಲ. ಹೃದಯ ಪೂರ್ವಕವಾಗಿ ಆಚರಿಸುವ ಮನೋಭಾವನೆ ಮೂಡಿಸಿಕೊಳ್ಳಬೇಕು. ಮುಖ್ಯವಾಗಿ ಧಾರ್ಮಿಕ ವಿಚಾರ ಬಂದಾಗ ರಾಜಕಾರಣವನ್ನು ಮೊದಲು ಬದಿಗಿಟ್ಟು ಒಗಟ್ಟಿನಿಂದ ಗಣೇಶ ಉತ್ಸವ ಆಚರಿಸಲು ಎಲ್ಲರೂ ಕೈಜೋಡಿಸಬೇಕೆಂದು ಸಲಹೆ ನೀಡಿದರು.
ಸಭೆಯಲ್ಲಿ ವಿವಿಧ ಪಕ್ಷ ಹಾಗೂ ಸಂಘಟನೆ ಮುಖಂಡರಾದ ಮುಖಂಡರಾದ ಎಂ.ಪಿ.ಕುಮಾರಸ್ವಾಮಿ, ಎಂ.ಆರ್.ಜಗದೀಶ್, ವಿ.ಕೆ.ಶಿವೇಗೌಡ, ರಂಜನ್ ಅಜಿತ್‌ಕುಮಾರ್, ಗಬ್ಬಳ್ಳಿ ಚಂದ್ರೇಗೌಡ, ಗಜೇಂದ್ರ ಕೊಟ್ಟಿಗೆಹಾರ, ಮಂಚೇಗೌಡ, ನರೇಂದ್ರ, ಕೆಂಜಿಗೆ ಕೇಶವ್, ಭರತ್ ಬಾಳೂರು, ಬ್ರಿಜೇಶ್ ಕಡಿದಾಳ್, ಬಕ್ಕಿ ಪ್ರಸಾದ್, ವಿಭಾಸುಶ್ಮಾ, ಚಂದ್ರೇಗೌಡ ಬಾಳೂರು, ಸಿದ್ದಯ್ಯ, ವಿನೋಧ್ ಕಣಚೂರು ಮತ್ತಿತರರಿದ್ದರು.


