Flash Story
“ಧರ್ಮ ಜಾಗೃತಿಗೆ ಗಣೇಶೋತ್ಸವ ಶಕ್ತಿಕೇಂದ್ರವಾಗಲಿ: ರಮಾನಂದಗೌಡ”
ಮೂಡಿಗೆರೆಯಲ್ಲಿ ಆಗಸ್ಟ್ 6ರಂದು ಮೆಸ್ಕಾಂ ಜನಸಂಪರ್ಕ ಸಭೆ
ತಮಿಳುನಾಡಿಗೆ ಕಾವೇರಿ ನೀಡು ಬಿಡದಂತೆ ಒತ್ತಾಯಿಸಿ ಕರವೆ ಹಾಗೂ ರೈತ ಸಂಘದಿoದ ಪ್ರತಿಭಟನೆ
ನನ್ನ ಪ್ರೀತಿಯ ಹಿತೈಷಿಗಳೇ ನಾನು ನ್ಯಾಯಾಲಯದ ಆದೇಶಕ್ಕೆ ತಲೆಬಾಗುತ್ತೇನೆ. ಎಂ.ಕೆ ಪ್ರಾಣೇಶ್.
“ಹಿರಿಯರನ್ನು ಅವಮಾನಿಸುತ್ತಿದ್ದಾರೆ” – ನಯನ ಮೋಟಮ್ಮ ವಿರುದ್ಧ ಎಂ.ಪಿ. ಕುಮಾರಸ್ವಾಮಿ ಗಂಭೀರ ಆರೋಪ
ಕೋಳೂರು ರಸ್ತೆ ಅವ್ಯವಸ್ಥೆ: ವಿದ್ಯಾರ್ಥಿಗಳ ಪರದಾಟ, ಪಂಚಾಯತ್ ವಿರುದ್ಧ ಸ್ಥಳೀಯರ ಕಿಡಿ
ಬಿಡದಿ ಟೌನ್​ಶಿಪ್ ವಿವಾದ: ವಿರೋಧದ ಮಧ್ಯೆ ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಬಿಡುಗಡೆ ಮಾಡಿದ ಸರ್ಕಾರ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ವಿರುದ್ಧ ಬಂಡಾಯ: ಕ್ರಮ ಕೈಗೊಳ್ಳದಿದ್ದರೆ ಸಾಮೂಹಿಕ ರಾಜೀನಾಮೆ ಎಚ್ಚರಿಕೆ
ಮಾನವೀಯತೆ ಮೆರೆದ ಬಜರಂಗದಳ ಕಾರ್ಯಕರ್ತರು: ಹಸುವಿಗೆ ನೆರವೇರಿತು ಗೌರವಯುತ ಅಂತಿಮ ವಿಧಿ….!!

ಮಾನವೀಯತೆ ಮೆರೆದ ಬಜರಂಗದಳ ಕಾರ್ಯಕರ್ತರು: ಹಸುವಿಗೆ ನೆರವೇರಿತು ಗೌರವಯುತ ಅಂತಿಮ ವಿಧಿ….!!

Spread the love

ಮೂಡಿಗೆರೆ ತಾಲ್ಲೂಕಿನ ಬೆಳಗೋಡು ಗ್ರಾಮದಲ್ಲಿ ಅನಾರೋಗ್ಯದಿಂದ ಮೃತಪಟ್ಟ ಹಸುವಿಗೆ ಗ್ರಾಮದ ಯುವಕರು ಹಾಗೂ ಬಜರಂಗದಳ ಕಾರ್ಯಕರ್ತರು ಮಾನವೀಯತೆಯ ಉದಾಹರಣೆಯಾಗುವಂತೆ ಗೌರವಯುತ ಅಂತ್ಯಸಂಸ್ಕಾರ ನೆರವೇರಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಗ್ರಾಮದ ನಿವಾಸಿಯೊಬ್ಬರ ಹಸು ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿತ್ತು. ವಿಷಯ ತಿಳಿಯುತ್ತಿದ್ದಂತೆ ಬೆಳಗೋಡು ಗ್ರಾಮದ ಬಜರಂಗದಳ ಕಾರ್ಯಕರ್ತರು ಮತ್ತು ಯುವಕರು ಸ್ಥಳಕ್ಕೆ ಆಗಮಿಸಿ, ಹಸುವಿಗೆ ಗೌರವಪೂರ್ವಕವಾಗಿ ಅಂತಿಮ ನಮನ ಸಲ್ಲಿಸಿದರು.

ಬಳಿಕ ಗ್ರಾಮಸ್ಥರ ಸಹಕಾರದೊಂದಿಗೆ ಸೂಕ್ತ ಸ್ಥಳದಲ್ಲಿ ಗುಂಡಿ ತೋಡಿ, ಸಂಪ್ರದಾಯಬದ್ಧವಾಗಿ ಹಸುವಿನ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಮೂಗ ಪ್ರಾಣಿಗಳ ಮೇಲಿನ ಕಾಳಜಿ ಮತ್ತು ಗೌರವವನ್ನು ತೋರಿಸುವ ಈ ಕಾರ್ಯ ಗ್ರಾಮದಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು

Leave a Reply

Your email address will not be published. Required fields are marked *

Back To Top