Flash Story
“ಧರ್ಮ ಜಾಗೃತಿಗೆ ಗಣೇಶೋತ್ಸವ ಶಕ್ತಿಕೇಂದ್ರವಾಗಲಿ: ರಮಾನಂದಗೌಡ”
ಮೂಡಿಗೆರೆಯಲ್ಲಿ ಆಗಸ್ಟ್ 6ರಂದು ಮೆಸ್ಕಾಂ ಜನಸಂಪರ್ಕ ಸಭೆ
ತಮಿಳುನಾಡಿಗೆ ಕಾವೇರಿ ನೀಡು ಬಿಡದಂತೆ ಒತ್ತಾಯಿಸಿ ಕರವೆ ಹಾಗೂ ರೈತ ಸಂಘದಿoದ ಪ್ರತಿಭಟನೆ
ನನ್ನ ಪ್ರೀತಿಯ ಹಿತೈಷಿಗಳೇ ನಾನು ನ್ಯಾಯಾಲಯದ ಆದೇಶಕ್ಕೆ ತಲೆಬಾಗುತ್ತೇನೆ. ಎಂ.ಕೆ ಪ್ರಾಣೇಶ್.
“ಹಿರಿಯರನ್ನು ಅವಮಾನಿಸುತ್ತಿದ್ದಾರೆ” – ನಯನ ಮೋಟಮ್ಮ ವಿರುದ್ಧ ಎಂ.ಪಿ. ಕುಮಾರಸ್ವಾಮಿ ಗಂಭೀರ ಆರೋಪ
ಕೋಳೂರು ರಸ್ತೆ ಅವ್ಯವಸ್ಥೆ: ವಿದ್ಯಾರ್ಥಿಗಳ ಪರದಾಟ, ಪಂಚಾಯತ್ ವಿರುದ್ಧ ಸ್ಥಳೀಯರ ಕಿಡಿ
ಬಿಡದಿ ಟೌನ್​ಶಿಪ್ ವಿವಾದ: ವಿರೋಧದ ಮಧ್ಯೆ ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಬಿಡುಗಡೆ ಮಾಡಿದ ಸರ್ಕಾರ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ವಿರುದ್ಧ ಬಂಡಾಯ: ಕ್ರಮ ಕೈಗೊಳ್ಳದಿದ್ದರೆ ಸಾಮೂಹಿಕ ರಾಜೀನಾಮೆ ಎಚ್ಚರಿಕೆ
ಮಾನವೀಯತೆ ಮೆರೆದ ಬಜರಂಗದಳ ಕಾರ್ಯಕರ್ತರು: ಹಸುವಿಗೆ ನೆರವೇರಿತು ಗೌರವಯುತ ಅಂತಿಮ ವಿಧಿ….!!

ಜೂನ್ 13 ರಂದು ಮಾನಸಿಕ ಒತ್ತಡ ನಿರ್ವಹಣೆ ಉಪನ್ಯಾಸ

Spread the love

ಜೂನ್ 13 ರಂದು ಮಾನಸಿಕ ಒತ್ತಡ ನಿರ್ವಹಣೆ ಉಪನ್ಯಾಸ
ಕೊಟ್ಟಿಗೆಹಾರ:ಪದ್ಮಶ್ರೀ ಪ್ರಶಸ್ತಿ ವಿಜೇತ ಖ್ಯಾತ ಮನೋವೈದ್ಯರಾದ ಡಾ. ಸಿ.ಆರ್‍.ಚಂದ್ರಶೇಖರ್‍
ಅವರು ಜೂನ್ 13 ರಂದು ವಿದ್ಯಾರ್ಥಿಗಳಲ್ಲಿ ಮಾನಸಿಕ ಒತ್ತಡ, ಕಲಿಕೆಗೆ ಸವಾಲು, ನಿರ್ವಹಣೆ ಮತ್ತು
ಪರಿಹಾರ ಈ ವಿಷಯವಾಗಿ ಉಪನ್ಯಾಸ ಮತ್ತು ಸಂವಾದ ನಡೆಸಿಕೊಡಲಿದ್ದಾರೆ ಎಂದು ಚಿಕ್ಕಮಗಳೂರಿನ
ಕದ್ರಿಮಿದ್ರಿಯ ಕುವೆಂಪು ವಿದ್ಯಾನಿಕೇತನ ಸಂಸ್ಥೆಯ ಕಾರ್ಯದರ್ಶಿ ಕೆ.ಸಿ ಶಂಕರ್‍ ತಿಳಿಸಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಅವರು, ಆಧುನಿಕ, ಯಾಂತ್ರಿಕ ವಾತಾವರಣದಲ್ಲಿ ಮಾನಸಿಕ ಒತ್ತಡ
ನಿರ್ವಹಣೆಯು ಸುಗಮ ಕಲಿಕೆಗೆ ತುಂಬಾ ಮುಖ್ಯ. ಕಲಿಕಾ ಪ್ರಕ್ರಿಯೆಯಲ್ಲಿ ಪಾಲುದಾರರಾದ ಶಿಕ್ಷಕರು
ಮತ್ತು ವಿದ್ಯಾರ್ಥಿಗಳು ಮಾನಸಿಕ ಒತ್ತಡ ಸಮಸ್ಯೆಯನ್ನು ಸಮಗ್ರವಾಗಿ ಮತ್ತು ವೈಜ್ಞಾನಿಕವಾಗಿ
ತಿಳಿದುಕೊಳ್ಳುವುದು ತುಂಬಾ ಮುಖ್ಯ. ಈ ಹಿನ್ನಲೆಯಲ್ಲಿ ಕದ್ರಿಮಿದ್ರಿಯ ಕುವೆಂಪು ವಿದ್ಯಾನಿಕೇತನ
ಸಂಸ್ಥೆಯಲ್ಲಿ ಜೂನ್ 13 ರಂದು ಮನೋವೈದ್ಯರಾದ ಡಾ. ಸಿ.ಆರ್‍.ಚಂದ್ರಶೇಖರ್‍ ಅವರು
ಮಾತನಾಡಲಿದ್ದಾರೆ ಎಂದರು.
ಈ ಕಾರ್ಯಕ್ರಮದ ಸದುಪಯೋಗವನ್ನು ಶಿಕ್ಷಕರು ಪಡೆದುಕೊಳ್ಳಬಹುದಾಗಿದ್ದು ಪ್ರತಿ ಶಾಲೆಯ ಇಬ್ಬರು
ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗೆ 9482381758 ಗೆ
ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Back To Top