Flash Story
“ಧರ್ಮ ಜಾಗೃತಿಗೆ ಗಣೇಶೋತ್ಸವ ಶಕ್ತಿಕೇಂದ್ರವಾಗಲಿ: ರಮಾನಂದಗೌಡ”
ಮೂಡಿಗೆರೆಯಲ್ಲಿ ಆಗಸ್ಟ್ 6ರಂದು ಮೆಸ್ಕಾಂ ಜನಸಂಪರ್ಕ ಸಭೆ
ತಮಿಳುನಾಡಿಗೆ ಕಾವೇರಿ ನೀಡು ಬಿಡದಂತೆ ಒತ್ತಾಯಿಸಿ ಕರವೆ ಹಾಗೂ ರೈತ ಸಂಘದಿoದ ಪ್ರತಿಭಟನೆ
ನನ್ನ ಪ್ರೀತಿಯ ಹಿತೈಷಿಗಳೇ ನಾನು ನ್ಯಾಯಾಲಯದ ಆದೇಶಕ್ಕೆ ತಲೆಬಾಗುತ್ತೇನೆ. ಎಂ.ಕೆ ಪ್ರಾಣೇಶ್.
“ಹಿರಿಯರನ್ನು ಅವಮಾನಿಸುತ್ತಿದ್ದಾರೆ” – ನಯನ ಮೋಟಮ್ಮ ವಿರುದ್ಧ ಎಂ.ಪಿ. ಕುಮಾರಸ್ವಾಮಿ ಗಂಭೀರ ಆರೋಪ
ಕೋಳೂರು ರಸ್ತೆ ಅವ್ಯವಸ್ಥೆ: ವಿದ್ಯಾರ್ಥಿಗಳ ಪರದಾಟ, ಪಂಚಾಯತ್ ವಿರುದ್ಧ ಸ್ಥಳೀಯರ ಕಿಡಿ
ಬಿಡದಿ ಟೌನ್​ಶಿಪ್ ವಿವಾದ: ವಿರೋಧದ ಮಧ್ಯೆ ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಬಿಡುಗಡೆ ಮಾಡಿದ ಸರ್ಕಾರ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ವಿರುದ್ಧ ಬಂಡಾಯ: ಕ್ರಮ ಕೈಗೊಳ್ಳದಿದ್ದರೆ ಸಾಮೂಹಿಕ ರಾಜೀನಾಮೆ ಎಚ್ಚರಿಕೆ
ಮಾನವೀಯತೆ ಮೆರೆದ ಬಜರಂಗದಳ ಕಾರ್ಯಕರ್ತರು: ಹಸುವಿಗೆ ನೆರವೇರಿತು ಗೌರವಯುತ ಅಂತಿಮ ವಿಧಿ….!!

ಸರ್ವೇ ಸ್ಕೆಚ್‌ಗೆ ₹20 ಸಾವಿರ ಲಂಚ ಬೇಡಿಕೆ: ಮೂಡಿಗೆರೆಯ ಸರ್ಕಾರಿ ಸರ್ವೇಯರ್ ಲೋಕಾಯುಕ್ತ ಬಲೆಗೆ

Spread the love

ಚಿಕ್ಕಮಗಳೂರು : ಸರ್ವೇ ಸ್ಕೆಚ್ ಮಾಡಿಕೊಡಲು ಲಂಚಕ್ಕೆ ಬೇಡಿಕೆ – ಸರ್ಕಾರಿ ಸರ್ವೇಯರ್ ಲೋಕಾಯುಕ್ತ ಬಲೆಗೆ

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪಟ್ಟಣದ ಎ.ಡಿ.ಎಲ್.ಆರ್. ಕಚೇರಿಯಲ್ಲಿ ಸರ್ವೇ ಸ್ಕೆಚ್ ಮಾಡಿಕೊಡುವುದಕ್ಕಾಗಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಸರ್ಕಾರಿ ಸರ್ವೇಯರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ದೇವವೃಂದ ಗ್ರಾಮದ ಮಂಜುನಾಥ್ ಎಂಬುವವರ ಜಮೀನಿನ ಸರ್ವೇ ನಡೆಸಿ ಸ್ಕೆಚ್ ನೀಡಲು ಸರ್ಕಾರಿ ಸರ್ವೇಯರ್ ಸುಮಾ ಅವರು 20 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ಕುರಿತು ಮಂಜುನಾಥ್ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು.

ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು, 15 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಮೂಡಿಗೆರೆ ಎ.ಡಿ.ಎಲ್.ಆರ್. ಕಚೇರಿಯಲ್ಲೇ ಸರ್ಕಾರಿ ಸರ್ವೇಯರ್ ಸುಮಾ ಅವರನ್ನು ಬಲೆಗೆ ಬೀಳಿಸಿದ್ದಾರೆ.

ಲೋಕಾಯುಕ್ತ ಡಿವೈಎಸ್‌ಪಿ ತಿರುಮಲೇಶ್ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮುಂದುವರಿದಿದೆ.

Leave a Reply

Your email address will not be published. Required fields are marked *

Back To Top