ಮಳೆಗಾಲದ ಪ್ರಕೃತಿ ವಿಕೋಪಕ್ಕೆ ಸನ್ನದ್ಧರಾಗಿ: ಶೌರ್ಯ ವಿಪತ್ತು ಘಟಕಕ್ಕೆ ಕರೆ

Spread the love

ಮೂಡಿಗೆರೆ,
ಮಳೆಗಾಲದ ಪ್ರಕೃತಿ ವಿಕೋಪಕ್ಕೆ ಸನ್ನದ್ಧರಾಗಲು
ಶೌರ್ಯ ವಿಪತ್ತು ಘಟಕದ ತುರ್ತು ಸಭೆ


ಮಳೆಯಿಂದ ಸಂಭವಿಸಬಹುದಾದ ಪ್ರಕೃತಿ ವಿಕೋಪವನ್ನು ಸಮರ್ಥವಾಗಿ
ಎದುರಿಸಲು ವಿಪತ್ತು ನಿರ್ವಹಣೆಯಲ್ಲಿ ತೊಡಗಿರುವ ಸ್ವಯಂಸೇವಕರು ಸದಾ
ಸನ್ನದ್ಧರಾಗಿರಬೇಕೆಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ
ಯೋಜನೆ ಜಿಲ್ಲಾ ನಿರ್ದೇಶಕ ಸದಾನಂದ ಬಂಗೇರ ಹೇಳಿದರು.
ಅವರು ಸೋಮವಾರ ಪಟ್ಟಣದ ತಾಲೂಕು ಯೋಜನಾ ಕಚೇರಿಯಲ್ಲಿ ಶ್ರೀ
ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಏರ್ಪಡಿಸಿದ್ದ
ಶೌರ್ಯ ವಿಪತ್ತು ಘಟಕದ ಕೋರ್ ಕಮಿಟಿ ಸಭೆಯಲ್ಲಿ ಮಾತನಾಡಿದರು.
ಮಲೆನಾಡು ಭಾಗದಲ್ಲಿ ಪ್ರತಿ ವರ್ಷ ರಸ್ತೆ, ಮನೆ, ಗುಡ್ಡ ಕುಸಿತ ಸೇರಿದಂತೆ
ನಾನಾ ರೀತಿಯ ಸಮಸ್ಯೆಗಳು ಎದುರಾಗಿತ್ತವೆ. ತುರ್ತು ಪರಿಸ್ಥಿತಿಯಲ್ಲಿ ಜನರ
ರಕ್ಷಣೆ ಮಾಡಲು ನಮ್ಮ ತಂಡ ಸದಾ ಸಿದ್ಧರಾಗಿರಬೇಕೆಂದು ಕರೆ ನೀಡಿದರು.
ಚಿತ್ರದುರ್ಗದ ಜನಜಾಗೃತಿ ಯೋಜನಾಧಿಕಾರಿ ನಾಗರಾಜ್ ಕುಲಾಲ್
ಮಾತನಾಡಿ, ಪ್ರಕೃತಿ ವಿಕೋಪದಿಂದಾಗುವ ಸಮಸ್ಯೆಗಳನ್ನು ಬಗೆಹರಿಸಲು
ಸರಕಾರ ನಾನಾ ರೀತಿಯ ವ್ಯವಸ್ಥೆ ಮಾಡಿಕೊಂಡರೂ ಕೂಡ ತಂಡದ ಸ್ವಯಂ
ಸೇವಕರು ಮುಂಚೂಣಿಯಲ್ಲಿ ನಿಲ್ಲಬೇಕು. ಆಗ ಮಾತ್ರ ವಿಕೋಪದಿಂದ
ಉAಟಾಗುವ ಜೀವ ಹಾನಿ ಹಾಗೂ ಆಸ್ತಿಪಾಸ್ತಿ ನಷ್ಟವನ್ನು ಗಣನೀಯವಾಗಿ ಕಡಿಮೆ
ಮಾಡಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಶೌರ್ಯ ವಿಪತ್ತು ಯೋಜನಾಧಿಕಾರಿ ಕಿಶೋರ್, ತಾಲೂಕು ಯೋಜನಾಧಿಕಾರಿ
ಬೇಬಿ, ಕ್ಯಾಪ್ಟನ್ ರವಿ, ಜನಜಾಗೃತಿ ವೇದಿಕೆ ಮುಖಂಡ ಸುರೇಶ್ ಶೆಟ್ಟಿ
ಮತ್ತಿತರರಿದ್ದರು.

Leave a Reply

Your email address will not be published. Required fields are marked *

Back To Top