ಮೂಡಿಗೆರೆ,#
ವಲಸೆ ನುಸುಳುಕೋರರಿಂದ ನಡೆಯುವ ಅಕ್ರಮಗಳಿಗೆ
ಕಡಿವಾಣ ಹಾಕಬೇಕು: ಪ್ರಮೋದ್ ಮುತಾಲಿಕ್

ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಕ್ರಮವಾಗಿ ಬಾಂಗ್ಲ ವಲಸಿಗರು
ಆಗಮಿಸಿದ್ದು, ಇದಕ್ಕೆ ಸರಕಾರ ಹಾಗೂ ಪೊಲೀಸ್ ಇಲಾಖೆ ಕಡಿವಾಣ ಹಾಕಬೇಕೆಂದು
ಶ್ರೀರಾಮಸೇನೆ ರಾಷ್ಟಿçÃಯ ಅಧ್ಯಕ್ಷ ಪ್ರಮೋಧ್ ಮುತಾಲಿಕ್ ಒತ್ತಾಯಿಸಿದರು.
ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಕಾಫಿ
ತೋಟಕ್ಕೆ ಬರುವ ವಲಸೆ ಕಾರ್ಮಿಕರ ಬಗ್ಗೆ ತೋಟದ ಮಾಲೀಕರು ಎಚ್ಚರಿಕೆ
ವಹಿಸಬೇಕು. ಬಾಂಗ್ಲಾದವರು ನಿಜವಾಗಿಯೂ ಕಾರ್ಮಿಕರಾಗಿ ಇಲ್ಲಿಗೆ ಬರುತ್ತಿಲ್ಲ.
ಬದಲಾಗಿ ಲವ್ ಜಿಹಾದ್ ಹಾಗೂ ಅಕ್ರಮ ಚಟುವಟಿಕೆ ನಡೆಸಲು ಬಂದಿದ್ದಾರೆ. ಇದರಿಂದ
ಮುAದಿನ ದಿನದಲ್ಲಿ ದೇಶಕ್ಕೆ ಅಪಾಯ ತಪ್ಪಿದ್ದಲ್ಲ. ಲಾಭ ಹಾಗೂ ಸ್ವಾರ್ಥಕ್ಕಾಗಿ
ವಲಸೆ ಕಾರ್ಮಿಕರನ್ನು ಯಾರೂ ಸೇರಿಸಿಕೊಳ್ಳಬಾರದು. ಕಾರ್ಮಿಕರು
ಬೇಕಿದ್ದರೂ ಶ್ರೀರಾಮ ಸೇನೆಯ ಕಾರ್ಯಕರ್ತರನ್ನು ಸಂಪರ್ಕಿಸಿದ್ದಲ್ಲಿ,
ನಮ್ಮ ರಾಜ್ಯದಲ್ಲಿಯೇ ಇರುವ ಕಾರ್ಮಿಕರನ್ನು ಕಳುಹಿಸಲು
ಸಿದ್ದವಿದ್ದೇವೆಂದು ಹೇಳಿದರು.
ಬಾಳೆಹೊನ್ನೂರಿನಲ್ಲಿ ನಡೆದ ಲವ್ ಜಿಹಾದ್ ಪ್ರಕರಣಕ್ಕೆ ಸಂಬAಧಿಸಿದAತೆ
ಪೊಲೀಸರು ತುರ್ತಾಗಿ ಆರೋಪಿಯನ್ನು ಬಂಧಿಸಿರುವುದು ಸ್ವಾಗತಾರ್ಹ.
ಸಂತ್ರಸ್ತ ಮಹಿಳೆ ಕುಟುಂಬಕ್ಕೆ ರಾಜ್ಯ ಸರಕಾರ ೨೫ ಲಕ್ಷ ರೂ ಪರಿಹಾರ
ನೀಡಬೇಕು. ಬಂಧಿಸಿರುವ ಆರೋಪಿಗೆ ಯಾವುದೇ ವಕೀಲರು ವಕಾಲತ್ತು
ಹಾಕಬಾರದು. ಜಾಮೀನು ಕೊಡಬಾರದು. ದೇಶದಲ್ಲಿ ದಿನಕ್ಕೆ ೫.೦೦೦ ಲವ್ ಜಿಹಾದ್
ಪ್ರಕರಣ ನಡೆಯುತ್ತಿರುವುದನ್ನು ಗಮನಿಸಿದರೆ ದೇಶದ ಪರಿಸ್ಥಿತಿ ಬಗ್ಗೆ
ಭಯ ಉಂಟಾಗುತ್ತಿದೆ. ನಾವು ಮಾಡಿರುವ ಹೆಲ್ಪ್ಲೈನ್ನಿಂದಾಗಿ ಈಗಾಗಲೇ ೪.೮೦೦
ಯುವತಿಯರನ್ನು ಲವ್ ಜಿಹಾದ್ನಿಂದ ವಾಪಾಸು ಕರೆ ತರಲಾಗಿದೆ. ಈಗಲೂ ದಿನಕ್ಕೆ
ಕನಿಷ್ಟ ೮ ಸಾವಿರ ಕರೆ ಬರಲಾರಂಭಿಸಿದೆ ಎಂದು ಆತಂಕ ವ್ಯಕ್ತಪಡಿಸಿದರು. ,
ಆರ್ಎಸ್ಎಸ್ ಸಂಘಟನೆಯನ್ನು ನೊಂದಣಿ ಮಾಡುವ ಬಗ್ಗೆ ಕೇಂದ್ರ
ಸರಕಾರ ಹೇಳಬೇಕೆ ಹೊರತು, ಈ ರಾಜ್ಯದ ಗೃಹಸಚಿವರು ಹೇಳುವುದರಲ್ಲಿ
ಅರ್ಥವಿಲ್ಲ. ೧೦೦ ವರ್ಷದಿಂದ ಆರ್ಎಸ್ಎಸ್ ಸಂಘಟನೆ ದೇಶದ ಹಿತಕ್ಕಾಗಿ ಹೋರಾಡುತ್ತಿದೆ.
ಅರ್ಥವಿಲ್ಲದ ಹೇಳಿಕೆ ನೀಡುವ ಬದಲು ರಾಜ್ಯದಲ್ಲಿ ನಡೆಯುತ್ತಿರುವ ಡ್ರಕ್ಸ್
ಪಾಫಿಯಾ, ಲವ್ ಜಿಹಾದ್, ಗೋಹತ್ಯೆ ಪ್ರಕರಣವನ್ನು ತಡೆಗಟ್ಟುವ ಕೆಲಸ ಮಾಡಲಿ
ಎಂದ ಅವರು, ತನಗೆ ೨೬ ಜಿಲ್ಲೆಗೆ ಬಾರದಂತೆ ನಿರ್ಭಂಧಿಸಲಾಗಿದೆ. ಅದೇ ರೀತಿ
ಇತ್ತೀಚೆಗೆ ಸ್ವಾಮೀಜಿಗಳನ್ನು ಕೂಡ ಹಿಂದೂ ಸಮಾಜದ
ಕಾರ್ಯಕ್ರಮಗಳಿಗೆ ಹೋಗದಂತೆ ನ್ಯಾಯಾಲದಿಂದಲೂ ನೋಟೀಸು ನೀಡುವ
ಪ್ರಕರಣ ನಡೆದಿದೆ. ಯಾವುದೇ ಕಾರ್ಯಕ್ರಮಗಳಿರಲಿ, ಅಲ್ಲಿ
ಪ್ರಚೋಧನಕಾರಿ ಭಾಷಣ ಮಾಡುವ ಮುನ್ನವೇ ನಿರ್ಭಂಧ ಹಾಕುತ್ತಿರುವ
ಕ್ರಮ ಸರಿಯಲ್ಲವೆಂದು ಹೇಳಿದರು.
ಶ್ರೀ ರಾಮಸೇನೆ ರಾಜ್ಯಾಧ್ಯಕ್ಷ ಸುಂದ್ರೇಶ್ ನರ್ಗಲ್, ಜಿಲ್ಲಾಧ್ಯಕ್ಷ
ಸುನೀಲ್ಶೆಟ್ಟಿ, ವಿಶ್ವ ಹಿಂದೂ ಪರಿಷತ್ನ ಉಪಾಧ್ಯಕ್ಷ ಅವಿನಾಶ್, ಸುಂದ್ರೇಶ್
ಕೊಣಗೆರೆ ಉಪಸ್ಥಿತರಿದ್ದರು.


