ಮೂಡಿಗೆರೆ : ಡಿ.ಕೆ. ಶಿವಕುಮಾರ್ ಅವರ ಮಹತ್ವಾಕಾಂಕ್ಷೆಯ ಯೋಜನೆಯಾದ ವಿದ್ಯಾರ್ಥಿಗಳ ಉಚಿತ ಬಸ್ ಪಾಸ್ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಮರಿಚಿಕೆಯಾಗಿದೆ.ಕರ್ನಾಟಕ ಒನ್ ಸೇರಿದಂತೆ ಎಲ್ಲಾ ಜಾಲತಾಣ ಪುಟಗಳು ವಿದ್ಯಾರ್ಥಿಗಳ ಕೈಗೆ ಸಿಗದಂತಾಗಿದೆ. ಸರ್ಕಾರದ ಸೈಟ್ ಗಳು ನಿಷ್ಕ್ರಿಯವಾಗಿದ್ದು ವಿದ್ಯಾರ್ಥಿಗಳಲ್ಲಿ ಗೊಂದಲಕ್ಕೀಡು ಮಾಡಿದೆ.

ಉಚಿತ ಬಸ್ ಪಾಸ್ ಘೋಷಣೆ -ಕಾರ್ಯ ನಿರ್ವಹಿಸದ ಕರ್ನಾಟಕ ಒನ್ ವೆಬ್ಸೈಟ್ ಪಾಸ್ ಪಡೆಯಲು ವಿದ್ಯಾರ್ಥಿಗಳ ಪರದಾಟ.
ರಾಜ್ಯದಲ್ಲಿ ನೂತನ ಸಿ ಎಂ ನೇಮಕ ಬೆನ್ನಲ್ಲೇ ನೂತನ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಯೋಜನೆ ಆದೇಶ.

KSRTC ಅಧಿಕಾರಿಗಳು ಕನಿಷ್ಠ ಮಾನವಿಯತೇ ತೋರಿಸದೆ ಅದು ನಮ್ಮ ಕೌಂಟರ್ ಅಲ್ಲಾ ಎಂದು ಅಂತ ಅರ್ಜಿಗಳನ್ನು ರಿಜೇಕ್ಟ್ ಮಾಡುತ್ತಾರೆ.
ಬಸ್ ಪಾಸ್ ಅರ್ಜಿ ಹಾಕುವಾಗ OTP ಗಳು ಬರದೆ ಇರುವುದು ದೊಡ್ಡ ಸಮಸ್ಯೆ ಆಗಿದ್ದು ಮಲೆನಾಡು ಭಾಗದ ಪೋಷಕರು ತಲೆ ಕೆಡಿಸಿಕೊಂಡಿದ್ದಾರೆ,
ಸಮಸ್ಯೆಗಳನ್ನು ಕರ್ನಾಟಕ ಓನ್ ಕೇಂದ್ರದ ಮುಖ್ಯಸ್ಥರುಗಳು ಸಮಸ್ಯೆಗಳನ್ನು ಬಗೆ ಹರಿಸಲು ಎಷ್ಟೇ ಮನವಿ ಮಾಡಿದರು ಬಗೆ ಹರಿಸಲು ಆಸಕ್ತಿ ವಹಿಸುತ್ತಿಲ್ಲ,
ಇದರಿಂದ ವಿದ್ಯಾರ್ಥಿಗಳು ಮತ್ತು ಪೋಷಕರು ನಷ್ಟ ಅನುಭವಿಸುತ್ತಿದ್ದಾರೆ.

ಉಚಿತ ಬಸ್ ಪಾಸ್ ಘೋಷಣೆ ಮಾಡಿದ ನಂತರ ಹಳೆಯ ಪಾಸು ಇಲ್ಲ ಹೊಸ ಪಾಸುಗಳು ಸಿಗುತ್ತಿಲ್ಲ ನಾವು ಏನು ಮಾಡಬೇಕು.
ಕಳೆದ ಒಂದು ತಿಂಗಳಿಂದ 2000 ಕ್ಕೂ ಹೆಚ್ಚು ಹಣ ನೀಡಿ ಬಸ್ ನಲ್ಲಿ ಪ್ರಯಾಣ ಇಂತಹ ಮಾನಗೆಟ್ಟ ಯೋಜನೆ ಬೇಕಿತ್ತಾ ಎಂಬುದು ವಿದ್ಯಾರ್ಥಿಗಳ ಪ್ರಶ್ನೆ.
ಸರ್ಕಾರದ ಹೊಸ ಯೋಜನೆ ಬಡ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಅನುಕೂಲವಾಗುವ ಬದಲು ಮಾರಕವಾಗಿದೆ. ಇದರಿಂದ ವಿದ್ಯಾರ್ಥಿಗಳು ಮತ್ತು ಪೋಷಕರಿಂದ ಸರ್ಕಾರಕ್ಕೆ ಹಿಡಿ ಶಾಪ.
ಬಸ್ ಪಾಸ್ ನೀಡುವ ಗುತ್ತಿಗೆ ಪಡೆದಿರುವ ಕರ್ನಾಟಕ ಒನ್ ಕೇಂದ್ರದವರ ಬಳಿಯಲ್ಲಿಯೂ ಈ ಸಮಸ್ಯೆಗೆ ಉತ್ತರ ಸಿಗುತ್ತಿಲ್ಲ. ಅವರು ಸಮಸ್ಯೆಗೆ ಸರ್ಕಾರದ ಕಡೆ ಬೆರಳು ತೋರಿಸುತ್ತಾರೆ ವಿದ್ಯಾರ್ಥಿಗಳ ಆರೋಪ.
ವಿದ್ಯಾರ್ಥಿಗಳ ಮತ್ತು ಪೋಷಕರ ಸಹನೆಯ ಕಟ್ಟೆ ಹೊಡೆಯುವ ಮುಂಚೆ ಪರ್ಯಾಯ ಬಸ್ ಪಾಸ್ ವ್ಯವಸ್ಥೆಗೆ ವಿದ್ಯಾರ್ಥಿಗಳ ಆಗ್ರಹ.


