Flash Story
“ಧರ್ಮ ಜಾಗೃತಿಗೆ ಗಣೇಶೋತ್ಸವ ಶಕ್ತಿಕೇಂದ್ರವಾಗಲಿ: ರಮಾನಂದಗೌಡ”
ಮೂಡಿಗೆರೆಯಲ್ಲಿ ಆಗಸ್ಟ್ 6ರಂದು ಮೆಸ್ಕಾಂ ಜನಸಂಪರ್ಕ ಸಭೆ
ತಮಿಳುನಾಡಿಗೆ ಕಾವೇರಿ ನೀಡು ಬಿಡದಂತೆ ಒತ್ತಾಯಿಸಿ ಕರವೆ ಹಾಗೂ ರೈತ ಸಂಘದಿoದ ಪ್ರತಿಭಟನೆ
ನನ್ನ ಪ್ರೀತಿಯ ಹಿತೈಷಿಗಳೇ ನಾನು ನ್ಯಾಯಾಲಯದ ಆದೇಶಕ್ಕೆ ತಲೆಬಾಗುತ್ತೇನೆ. ಎಂ.ಕೆ ಪ್ರಾಣೇಶ್.
“ಹಿರಿಯರನ್ನು ಅವಮಾನಿಸುತ್ತಿದ್ದಾರೆ” – ನಯನ ಮೋಟಮ್ಮ ವಿರುದ್ಧ ಎಂ.ಪಿ. ಕುಮಾರಸ್ವಾಮಿ ಗಂಭೀರ ಆರೋಪ
ಕೋಳೂರು ರಸ್ತೆ ಅವ್ಯವಸ್ಥೆ: ವಿದ್ಯಾರ್ಥಿಗಳ ಪರದಾಟ, ಪಂಚಾಯತ್ ವಿರುದ್ಧ ಸ್ಥಳೀಯರ ಕಿಡಿ
ಬಿಡದಿ ಟೌನ್​ಶಿಪ್ ವಿವಾದ: ವಿರೋಧದ ಮಧ್ಯೆ ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಬಿಡುಗಡೆ ಮಾಡಿದ ಸರ್ಕಾರ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ವಿರುದ್ಧ ಬಂಡಾಯ: ಕ್ರಮ ಕೈಗೊಳ್ಳದಿದ್ದರೆ ಸಾಮೂಹಿಕ ರಾಜೀನಾಮೆ ಎಚ್ಚರಿಕೆ
ಮಾನವೀಯತೆ ಮೆರೆದ ಬಜರಂಗದಳ ಕಾರ್ಯಕರ್ತರು: ಹಸುವಿಗೆ ನೆರವೇರಿತು ಗೌರವಯುತ ಅಂತಿಮ ವಿಧಿ….!!

ಜೇನುಬೈಲ್ ಕಟ್ಟಡ ವಿವಾದ: ಆರೋಪಗಳೆಲ್ಲ ಸುಳ್ಳು ಎಂದ ಗೌತಮ್

Spread the love

ಮೂಡಿಗೆರೆ, ಜೂ.23:

ಅಕ್ರಮ ವಾಣಿಜ್ಯ ಮಳಿಗೆ ನಿರ್ಮಿಸಿಲ್ಲ: ಗೌತಮ್ ಸ್ಪಷ್ಟನೆ ತಾಲೂಕಿನ ಜೇನಬೈಲ್ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ 73 ರಸ್ತೆ ಬದಿಯಲ್ಲಿ ತನ್ನ ತಂದೆ ಅಕ್ರಮವಾಗಿ ವಾಣಿಜ್ಯ ಮಳಿಗೆ ಕಟ್ಟುತ್ತಿಲ್ಲವೆಂದು ಗೌತಮ್ ಹೊಯ್ಸಳು ಹೇಳಿದರು.

“ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜೇನುಬೈಲ್ ಗ್ರಾಮದಲ್ಲಿ ತನ್ನ ತಂದೆ ಉದಯ ಅವರು 30 ವರ್ಷದ ಹಿಂದಿನ ಹಳೆ ಕಟ್ಟಡವನ್ನೇ ಹೊಸ ಮಾದರಿಯಲ್ಲಿ ದುರಸ್ತಿಪಡಿಸಿದ್ದಾರೆ. ಅದರಲ್ಲಿ ವಾಣಿಜ್ಯ ಮಳಿಗೆಗಳು ಇವೆ. ಕೂಗಳತೆ ದೂರದಲ್ಲಿರುವ ಕುಮಾರ್ ಎಂಬುವರು ದಿನಸಿ ಅಂಗಡಿ ಇಟ್ಟುಕೊಂಡಿದ್ದು, ನಮ್ಮ ಹೊಸ ಕಟ್ಟಡದಲ್ಲಿ ದಿನಸಿ ಅಂಗಡಿ ತೆರೆದರೆ ಕುಮಾರ್ ಅವರ ವ್ಯಾಪಾರಕ್ಕೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ತನ್ನ ತಂದೆ ನಿರ್ಮಿಸಿರುವ ಕಟ್ಟಡ ಅಕ್ರಮವಾಗಿದೆ ಎಂದು ತಾರೇಶ್ ಅವರ ಸಹಾಯ ಪಡೆದು ತೊಂದರೆ ನೀಡುತ್ತಿದ್ದಾರೆ. ನಾವು ಅಕ್ರಮ ಕಟ್ಟಡ ಕಟ್ಟಿಲ್ಲ. ತಂದೆ ಹೆಸರಿನಲ್ಲಿ 1.14 ಎಕರೆ ಹಾಗೂ ಅಜ್ಜಿ ಹೆಸರಿನಲ್ಲಿ 4 ಎಕರೆ ಜಮೀನು ಇದೆ. ಇದು ಬಿಟ್ಟರೆ ಯಾವ ಅರಣ್ಯ ಭೂಮಿಯನ್ನೂ ಒತ್ತುವರಿ ಮಾಡಿಕೊಂಡಿಲ್ಲವೆAದು ಸ್ಪಷ್ಟಪಡಿಸಿದರು. ನಾಗೇಶ್‌ಗೌಡ ಜೇನುಬೈಲ್ ಮಾತನಾಡಿ, ಉದಯ್ ಅವರು ನಿರ್ಮಿಸಿರುವ ಕಟ್ಟಡದಿಂದ ಸ್ಥಳೀಯರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗಿಲ್ಲ. ಇಬ್ಬರು ವ್ಯಕ್ತಿಗಳು ಮಾತ್ರ ವಯಕ್ತಿಕ ದ್ವೇಷದಿಂದ ಸ್ಥಳೀಯರಿಗೆ ತೊಂದರೆಯಾಗುತ್ತಿದೆ ಎಂದು ಸುಳ್ಳು ಹೇಳುತ್ತಿದ್ದಾರೆ. ಈ ವಿಚಾರವಾಗಿ ಜೂ.19ರಂದು ಉದಯ್ ಮತ್ತು ತಾರೇಶ್ ನಡುವೆ ಕತ್ತಿ, ದೊಣ್ಣೆ ಹಿಡಿದು ಪರಸ್ಪರ ಬೈದಾಡಿಕೊಂಡಿದ್ದಾರೆಯೆ ಹೊರತು, ಹಲ್ಲೆ ನಡೆಸಿಲ್ಲ. ಆದರೆ ತಾರೇಶ್ ಅವರು ತನ್ನ ಮೇಲೆ ಹಲ್ಲೆಯಾಗಿದೆ ಎಂದು ಸುಳ್ಳು ದೂರು ನೀಡಿದ್ದಾರೆಂದು. ಉದಯ್ ಅವರು ಯಾವುದೇ ಅಕ್ರಮ ಕಟ್ಟಡ ಕಟ್ಟಿಲ್ಲ. ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡಿಲ್ಲ. ಹಾಗೇನಾದರೂ ಇದ್ದರೆ ದಾಖಲೆ ಸಮೇತ ನಿರ್ಮಿಸಲಿ ಎಂದು ಸವಾಲು ಹಾಕಿದರು. ರಾಜಶೇಖರ್ ಹೊಯ್ಸಳಲು, ಸತೀಶ್‌ಗೌಡ ಹೊಯ್ಸಳಲು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Back To Top