: ರೈತ ಸಂಪರ್ಕ ಕೇಂದ್ರ, ಬಣಕಲ್ (RNR) ವತಿಯಿಂದ ರೈತರಿಗೆ ಬತ್ತದ ಬೀಜ ಹಾಗೂ ಪ್ರೋಮ್ ವರ್ಮಿ ಕಂಪೋಸ್ಟ್ ಅನ್ನು ಉಚಿತವಾಗಿ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಸಹಾಯಕ ಕೃಷಿ ನಿರ್ದೇಶಕಿ ಸುಮ ಅವರು ರೈತರಿಗೆ ಸರ್ಕಾರದ ವಿವಿಧ ಕೃಷಿ ಯೋಜನೆಗಳು ಹಾಗೂ ಗುಣಮಟ್ಟದ ಕೃಷಿ ಪರಿಕರಗಳ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ದಾಸ್ತಾನು ನಿರ್ವಾಹಕ ಪ್ರದೀಪ್, ತಾಂತ್ರಿಕ ಸಹಾಯಕಿ ಶ್ವೇತಾ ಹಾಗೂ ರೈತರು ಉಪಸ್ಥಿತರಿದ್ದು, ಯೋಜನೆಯಡಿ ವಿತರಿಸಲಾದ ಸೌಲಭ್ಯಗಳನ್ನು ಪಡೆದುಕೊಂಡರು.

