ಬಣಕಲ್ ರೈತ ಸಂಪರ್ಕ ಕೇಂದ್ರದಲ್ಲಿ ಬತ್ತ ಹಾಗೂ ಪ್ರೋಮ್ ವರ್ಮಿ ಕಂಪೋಸ್ಟ್ ಉಚಿತ ವಿತರಣೆ
: ರೈತ ಸಂಪರ್ಕ ಕೇಂದ್ರ, ಬಣಕಲ್ (RNR) ವತಿಯಿಂದ ರೈತರಿಗೆ ಬತ್ತದ ಬೀಜ ಹಾಗೂ ಪ್ರೋಮ್ ವರ್ಮಿ ಕಂಪೋಸ್ಟ್ ಅನ್ನು ಉಚಿತವಾಗಿ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸಹಾಯಕ ಕೃಷಿ ನಿರ್ದೇಶಕಿ ಸುಮ ಅವರು ರೈತರಿಗೆ ಸರ್ಕಾರದ ವಿವಿಧ ಕೃಷಿ ಯೋಜನೆಗಳು ಹಾಗೂ ಗುಣಮಟ್ಟದ ಕೃಷಿ ಪರಿಕರಗಳ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು.ಈ ಸಂದರ್ಭದಲ್ಲಿ ದಾಸ್ತಾನು ನಿರ್ವಾಹಕ ಪ್ರದೀಪ್, ತಾಂತ್ರಿಕ ಸಹಾಯಕಿ ಶ್ವೇತಾ ಹಾಗೂ ರೈತರು ಉಪಸ್ಥಿತರಿದ್ದು, ಯೋಜನೆಯಡಿ ವಿತರಿಸಲಾದ ಸೌಲಭ್ಯಗಳನ್ನು ಪಡೆದುಕೊಂಡರು.
“ಸರ್ಕಾರಕ್ಕೆ ಆಟ : ವಿದ್ಯಾರ್ಥಿಗಳಿಗೆ ಪ್ರಾಣ ಸಂಕಟ…???!!!”
ಮೂಡಿಗೆರೆ : ಡಿ.ಕೆ. ಶಿವಕುಮಾರ್ ಅವರ ಮಹತ್ವಾಕಾಂಕ್ಷೆಯ ಯೋಜನೆಯಾದ ವಿದ್ಯಾರ್ಥಿಗಳ ಉಚಿತ ಬಸ್ ಪಾಸ್ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಮರಿಚಿಕೆಯಾಗಿದೆ.ಕರ್ನಾಟಕ ಒನ್ ಸೇರಿದಂತೆ ಎಲ್ಲಾ ಜಾಲತಾಣ ಪುಟಗಳು ವಿದ್ಯಾರ್ಥಿಗಳ ಕೈಗೆ ಸಿಗದಂತಾಗಿದೆ. ಸರ್ಕಾರದ ಸೈಟ್ ಗಳು ನಿಷ್ಕ್ರಿಯವಾಗಿದ್ದು ವಿದ್ಯಾರ್ಥಿಗಳಲ್ಲಿ ಗೊಂದಲಕ್ಕೀಡು ಮಾಡಿದೆ. ಉಚಿತ ಬಸ್ ಪಾಸ್ ಘೋಷಣೆ -ಕಾರ್ಯ ನಿರ್ವಹಿಸದ ಕರ್ನಾಟಕ ಒನ್ ವೆಬ್‌ಸೈಟ್ ಪಾಸ್ ಪಡೆಯಲು ವಿದ್ಯಾರ್ಥಿಗಳ ಪರದಾಟ. ರಾಜ್ಯದಲ್ಲಿ ನೂತನ ಸಿ ಎಂ ನೇಮಕ ಬೆನ್ನಲ್ಲೇ ನೂತನ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ವಿದ್ಯಾರ್ಥಿಗಳಿಗೆ […]
ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಶಾಲೆ, ಅಂಗನವಾಡಿಗಳಿಗೆ ರಜೆ ಘೋಷಣೆ!
ಚಿಕ್ಕಮಗಳೂರು: ಜಿಲ್ಲಾದ್ಯಂತ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ವಿದ್ಯಾರ್ಥಿಗಳ ಸುರಕ್ಷತೆಯ ಹಿತದೃಷ್ಟಿಯಿಂದ ಜಿಲ್ಲಾಧಿಕಾರಿಗಳು ಮಹತ್ವದ ಆದೇಶ ಹೊರಡಿಸಿದ್ದಾರೆ. ನಾಳೆ (ಜುಲೈ 08, 2026ರ ಬುಧವಾರ) ಜಿಲ್ಲೆಯ ಹಲವು ತಾಲೂಕುಗಳಲ್ಲಿ ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳಿಗೆ ಅಧಿಕೃತ ರಜೆ ಘೋಷಿಸಲಾಗಿದೆ.ವಿಪತ್ತು ನಿರ್ವಹಣಾ ಕಾಯ್ದೆ ಕಲಂ 26, 30 ಮತ್ತು 34ರ ಅಡಿಯಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳು ಈ ತುರ್ತು ಆದೇಶವನ್ನು ಜಾರಿಗೊಳಿಸಿದ್ದಾರೆ.📍 ಎಲ್ಲೆಲ್ಲಿ ರಜೆ ಇರಲಿದೆ? (ತಾಲೂಕುವಾರು ವಿವರ):1. ಸಂಪೂರ್ಣ ರಜೆ ಇರುವ ತಾಲೂಕುಗಳು:ಕೊಪ್ಪ, ಕಳಸ, […]
ಧಾರಾಕಾರ ಮಳೆ ಹಿನ್ನೆಲೆ: ಮೂಡಿಗೆರೆ ತಾಲ್ಲೂಕಿನ ಶಾಲೆಗಳಿಗೆ ಇಂದು ರಜೆ ಘೋಷಣೆ
ಮೂಡಿಗೆರೆ ತಾಲ್ಲೂಕಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯ ಹಿನ್ನೆಲೆಯಲ್ಲಿ ದಿನಾಂಕ 07-07-2026 (ಮಂಗಳವಾರ) ರಂದು ಮೂಡಿಗೆರೆ ತಾಲ್ಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳು, ಸರ್ಕಾರಿ ಹಾಗೂ ಖಾಸಗಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಒಂದು ದಿನದ ರಜೆ ಘೋಷಿಸಲಾಗಿದೆ.ಮೂಡಿಗೆರೆ ತಹಶೀಲ್ದಾರ್ ಅವರು ಆದೇಶ ಹೊರಡಿಸಿದ್ದಾರೆ.
ಧಾರಾಕಾರ ಮಳೆ: ಕಳಸ ತಾಲೂಕಿನ ಎಲ್ಲಾ ಅಂಗನವಾಡಿ ಮತ್ತು ಪ್ರಾಥಮಿಕ ಶಾಲೆಗಳಿಗೆ ನಾಳೆ ರಜೆ ಘೋಷಣೆ
ಧಾರಾಕಾರ ಮಳೆಯ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಎಲ್ಲಾ ಅಂಗನವಾಡಿ ಹಾಗೂ ಪ್ರಾಥಮಿಕ. ನಾಳೆ ಮುಂಜಾಗ್ರತಾ ಕ್ರಮವಾಗಿ ರಜೆ ಘೋಷಿಸಲಾಗಿದೆ.ಕಳಸ ತಹಶೀಲ್ದಾರ್ ಮಂಜುನಾಥ್ ಅವರು ಈ ಕುರಿತು ಆದೇಶ ಹೊರಡಿಸಿದ್ದಾರೆ.
ಒತ್ತುವರಿ ಆಗಿದ್ದ ಸರ್ಕಾರಿ ಶಾಲಾ ಭೂಮಿ ವಾಪಸ್: ಮಂಜುಳ ಹೋರಾಟಕ್ಕೆ ಐತಿಹಾಸಿಕ ಜಯ!
ಒತ್ತುವರಿ ಆಗಿದ್ದ ಸರ್ಕಾರಿಶಾಲೆಯ ಭೂಮಿ ವಾಪಸ್! ಮೂಡಿಗೆರೆ ತಾಲ್ಲೂಕಿನ ಬಣಕಲ್‌ನ ಬಳಿಯ ಹೆಗ್ಗುಡ್ಲು ಸರ್ಕಾರಿ ಶಾಲೆಕಾನೂನು ಸಮರ ಸಾರಿದ್ದಗಟ್ಟಿಗಿತ್ತಿ ಮಂಜುಳ ಒತ್ತುವರಿ ಆಗಿದ್ದ ಹೆಗ್ಗುಡ್ಲುವಿನ ಸರ್ಕಾರಿ ಶಾಲಾ ಭೂಮಿಯನ್ನ ಹಿಂಪಡೆಯಲಾಗಿದೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಣಕಲ್ ಹೋಬಳಿಯ ಸರ್ಕಾರಿ ಶಾಲೆಯ 9.5 ಗುಂಟೆ ಜಾಗ ಭೂಮಿ ಒತ್ತುವರಿ ಆಗಿತ್ತು. ಇದೀಗ ಒತ್ತುವರಿ ಆಗಿದ್ದ ಭೂಮಿಯನ್ನ ಶಾಲಾ ಆಡಳಿತ ಮಂಡಳಿ ವಾಪಸ್ ಪಡೆದಿದೆ. ಈ ಹೋರಾಟದ ಹಿಂದೆ ಇದ್ದದ್ದು ಹೆಗ್ಗುಡ್ಲು ಹೆಗ್ಗಡತಿ, ಮಂಜುಳ ಅವರು. ಶಾಲಾ ಭೂಮಿ […]
ಕೆಂಪೇಗೌಡರ ಆದರ್ಶಗಳು ಯುವಜನತೆಗೆ ದಾರಿದೀಪ: ಎಂ.ಕೆ. ಪ್ರಾಣೇಶ್
ಮೂಡಿಗೆರೆ, ಜೂ.27:ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮ ಸಮಾಜದ ಒಳಿತಿಗಾಗಿ ದೂರದೃಷ್ಟಿಯುಳ್ಳ ಆಡಳಿತಗಾರ, ಸಮಾಜಮುಖಿನಾಯಕ ಹಾಗೂ ಕನ್ನಡ ನಾಡಿನ ಹೆಮ್ಮೆಯ ಪುತ್ರ ಕೆಂಪೇಗೌಡರ ಜೀವನಚರಿತ್ರೆಯನ್ನು ಯುವ ಜನತೆ ತಿಳಿದುಕೊಳ್ಳಬೇಕೆಂದು ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಹೇಳಿದರು.ಅವರು ಶನಿವಾರ ಪಟ್ಟಣದ ಬಿಜಿಎಸ್ ಒಕ್ಕಲಿಗರ ಸಂಘ ಪಿಯು ಕಾಲೇಜುಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿಯಿಂದ ಏರ್ಪಡಿಸಿದ್ದ 517ನೇನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕೆಂಪೇಗೌಡರು 16ನೇ ಶತಮಾನದಲ್ಲಿ ಬೆಂಗಳೂರನ್ನು ಯೋಜಿತನಗರವನ್ನಾಗಿ ರೂಪಿಸಿದರು. ಕೆರೆಗಳು, ಉದ್ಯಾನಗಳು, ದೇವಾಲಯಗಳು,ರಸ್ತೆಗಳನ್ನು ನಿರ್ಮಿಸಿ ಜನರ ಬದುಕು ಸುಧಾರಿಸುವ […]
#ಅಕ್ರಮ ವಲಸೆ, ಲವ್ ಜಿಹಾದ್ ವಿರುದ್ಧ ಮುತಾಲಿಕ್ ವಾಗ್ದಾಳಿ#
ಮೂಡಿಗೆರೆ,# ವಲಸೆ ನುಸುಳುಕೋರರಿಂದ ನಡೆಯುವ ಅಕ್ರಮಗಳಿಗೆಕಡಿವಾಣ ಹಾಕಬೇಕು: ಪ್ರಮೋದ್ ಮುತಾಲಿಕ್ ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಕ್ರಮವಾಗಿ ಬಾಂಗ್ಲ ವಲಸಿಗರುಆಗಮಿಸಿದ್ದು, ಇದಕ್ಕೆ ಸರಕಾರ ಹಾಗೂ ಪೊಲೀಸ್ ಇಲಾಖೆ ಕಡಿವಾಣ ಹಾಕಬೇಕೆಂದುಶ್ರೀರಾಮಸೇನೆ ರಾಷ್ಟಿçÃಯ ಅಧ್ಯಕ್ಷ ಪ್ರಮೋಧ್ ಮುತಾಲಿಕ್ ಒತ್ತಾಯಿಸಿದರು.ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಕಾಫಿತೋಟಕ್ಕೆ ಬರುವ ವಲಸೆ ಕಾರ್ಮಿಕರ ಬಗ್ಗೆ ತೋಟದ ಮಾಲೀಕರು ಎಚ್ಚರಿಕೆವಹಿಸಬೇಕು. ಬಾಂಗ್ಲಾದವರು ನಿಜವಾಗಿಯೂ ಕಾರ್ಮಿಕರಾಗಿ ಇಲ್ಲಿಗೆ ಬರುತ್ತಿಲ್ಲ.ಬದಲಾಗಿ ಲವ್ ಜಿಹಾದ್ ಹಾಗೂ ಅಕ್ರಮ ಚಟುವಟಿಕೆ ನಡೆಸಲು ಬಂದಿದ್ದಾರೆ. ಇದರಿಂದಮುAದಿನ ದಿನದಲ್ಲಿ ದೇಶಕ್ಕೆ ಅಪಾಯ ತಪ್ಪಿದ್ದಲ್ಲ. ಲಾಭ […]
ಜೇನುಬೈಲ್ ಕಟ್ಟಡ ವಿವಾದ: ಆರೋಪಗಳೆಲ್ಲ ಸುಳ್ಳು ಎಂದ ಗೌತಮ್
ಮೂಡಿಗೆರೆ, ಜೂ.23: ಅಕ್ರಮ ವಾಣಿಜ್ಯ ಮಳಿಗೆ ನಿರ್ಮಿಸಿಲ್ಲ: ಗೌತಮ್ ಸ್ಪಷ್ಟನೆ ತಾಲೂಕಿನ ಜೇನಬೈಲ್ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ 73 ರಸ್ತೆ ಬದಿಯಲ್ಲಿ ತನ್ನ ತಂದೆ ಅಕ್ರಮವಾಗಿ ವಾಣಿಜ್ಯ ಮಳಿಗೆ ಕಟ್ಟುತ್ತಿಲ್ಲವೆಂದು ಗೌತಮ್ ಹೊಯ್ಸಳು ಹೇಳಿದರು. “ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜೇನುಬೈಲ್ ಗ್ರಾಮದಲ್ಲಿ ತನ್ನ ತಂದೆ ಉದಯ ಅವರು 30 ವರ್ಷದ ಹಿಂದಿನ ಹಳೆ ಕಟ್ಟಡವನ್ನೇ ಹೊಸ ಮಾದರಿಯಲ್ಲಿ ದುರಸ್ತಿಪಡಿಸಿದ್ದಾರೆ. ಅದರಲ್ಲಿ ವಾಣಿಜ್ಯ ಮಳಿಗೆಗಳು ಇವೆ. ಕೂಗಳತೆ ದೂರದಲ್ಲಿರುವ ಕುಮಾರ್ ಎಂಬುವರು ದಿನಸಿ ಅಂಗಡಿ ಇಟ್ಟುಕೊಂಡಿದ್ದು, ನಮ್ಮ […]
ಲೋಕವಳ್ಳಿ ಕೆರೆ ಒತ್ತುವರಿ ತೆರವಿಗೆ ಅಧಿಕಾರಿಗಳಿಂದ ಜಿಪಿಎಸ್ ಕಾರ್ಯ
ಮೂಡಿಗೆರೆ ತಾಲೂಕಿನ ಲೋಕವಳ್ಳಿ ಸಮೀಪದ ಊರುಮುಂದಿನ ಕರೆ ಪ್ರದೇಶದಲ್ಲಿ ನಡೆದಿರುವ ಅಕ್ರಮ ಒತ್ತುವರಿಯನ್ನು ಗುರುತಿಸಿ ತೆರವುಗೊಳಿಸುವ ಉದ್ದೇಶದಿಂದ ಮಂಗಳವಾರ ಅಧಿಕಾರಿಗಳು ಜಿಪಿಎಸ್ ಮೂಲಕ ಭೂಮಾಪನ ಕಾರ್ಯ ನಡೆಸಿದರು.ಒತ್ತುವರಿ ಬಿಡಿಸುವ ಸಂಬAಧಿತ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕೆರೆಯ ಮೂಲ ಗಡಿ ಗುರುತುಗಳನ್ನು ಪತ್ತೆಹಚ್ಚುವ ಕೆಲಸ ಕೈಗೊಂಡರು. ಆಗ ಸುಮಾರು ೩ ಎಕರೆ ಪ್ರದೇಶ ಒತ್ತುವರಿಯಾಗಿರುವುದು ಮೇಲ್ನೋಟಕ್ಕೆ ಕಂಡು ಬಂತು. ಅಲ್ಲದೇ ಸಣ್ಣ ನೀರಾವರಿ ಇಲಾಖೆಯಿಂದ ಪರವಾನಗಿ ಪಡೆಯದೇ ಕೆರೆಯೊಳಗೆ ಜೆಜೆಎಂ ಕಾಮಗಾರಿಗಾಗಿ ಅಕ್ರಮವಾಗಿ ಬಾವಿ […]

